Tuesday, April 26, 2011









 ಬೇತಾಳನ ಕಥೆಗಳು, ಪಂಚತಂತ್ರ ಕಥೆಗಳು, ಜನಪದ ಕಥೆಗಳು ಇತ್ಯಾದಿಗಳಿಂದ ಒಂದು ಕಾಲದಲ್ಲಿ ಎಲ್ಲರ ಮನೆಮಾತಾಗಿದ್ದ ಚಂದಮಾಮ ಇಂದು ಅಪರೂಪ. ಆದರೆ ಈಗಲೂ ಅದಕ್ಕೆ ಬೇಕಾದಷ್ಟು ಓದುಗರಿದ್ದಾರೆ. ನಾನಂತು ಚಿಕ್ಕದಿರುವುಗಾ ತಪ್ಪದೇ ಓದುತ್ತಿದ್ದೆ. ಇಲ್ಲೊಂದು ಜಾನಪದ ಕಥೆಯಿದೆ ಚಂದಮಾಮದಿಂದ ಕದ್ದದ್ದು. ಇಷ್ಟವಾದರೆ ಈ ಲಿಂಕ್‌ ಮೂಲಕ ಹೋಗಿ ಸಾಕಾಗುವಷ್ಟು ಓದಿ ಬನ್ನಿ.
http://www.chandamama.com/lang/KAN/index.htm


 ಒಂದಾನೊಂದು ಕಾಲದಲ್ಲಿ ಧರ್ಮಾತ್ಮನೂ, ದಯಾಳುವೂ ಆದ ರಾಜನೊಬ್ಬನು ಒಂದು ರಾಜ್ಯವನಾ್ನಳುತ್ತಿದ್ದನು. ಅವನಿಗೇ ಮೂವರು ಮಕ್ಕಳು. ರೂಪ, ಪರಾಕ್ರಮಗಳಲ್ಲಿ ಮೂವರೂ ಸರಿ ಸಮಾನರಾಗಿರುತ್ತಿದ್ದರು. ಮೂವರು ಕುಮಾರರೂ ರಾಜಧಾನಿಗೇ ದೂರದಲ್ಲಿದ್ದ ಒಂದು ಪ್ರಖಾ್ಯತ ಗುರುಕುಲದಲ್ಲಿ ಸೇರಿ ಯುದ್ಧ ವಿದ್ಯೆಯಲ್ಲೂ, ರಾಜ್ಯ ಪರಿಪಾಲನೆಯ ವಿಷಯ ದಲ್ಲೂ ಪರಿಣತರಾಗಿ ರಾಜಧಾನಿಗೇ ಹಿಂದಿರು ಗಿದರು. ಕುಮಾರರು ಮೂವರಿಗೂ ರಾಜ್ಯ ಪರಿಪಾಲನೆಯ ಜವಾಬಾ್ದರಿಯನ್ನು ವಹಿಸ ಬೇಕೇಂದು ಕೊಂಡ ರಾಜನು ಅದಕೇ್ಕ ಮೊದಲು ಅವರಿಗೇ ಮದುವೆಯನ್ನೂ ಮಾಡಬೇಕೇಂದು ಆಸೆಪಟ್ಟನು.
ಮೂವರು ಕುಮಾರರಿಗೂ ಸರಿಯಾದ ಕನ್ಯೆಯರನ್ನು ನೋಡಿಬರಲು ರಾಜ್ಯದ ನಾಲ್ಕು ದಿಕ್ಕುಗಳಿಗೂ, ನೆರೆಹೊರೆಯ ರಾಜ್ಯಗಳಿಗೂ ರಾಜನು ಬುದ್ಧಿವಂತರಾದ ತನ್ನ ನಂಬುಗೇಯ ದೂತರನ್ನು ಕಳುಹಿಸಿದನು. ಕೇಲವು ದಿನಗಳನಂತರ ಒಬ್ಬ ದೂತನು ಬಂದು ತಾನು ನೋಡಿದ ಸುಂದರ ಕನ್ಯೆಯ ಬಗೇ್ಗ ತಿಳಿಸಿದನು. ಅಪರೂಪ ಸೌಂದರ್ಯವತಿಯೂ, ಗುಣವತಿಯೂ ಆದ ಅವಳು ಒಬ್ಬಳು ನರ್ತಕಿಯ ಮಗಳಾಗಿದ್ದಳು.
ಅವಳ ತಾಯಿಯು ರಾಜನ ಮೂವರು ಕುಮಾರರುಗಳ ರೂಪಲಾವಣಾ್ಯ ದಿಗಳನ್ನು ಕೇೀಳಿ ತಿಳಿದುಕೊಂಡಳು. ತನ್ನ  ಮಗಳನ್ನು ರಾಜನ ಹಿರಿಯ ಮಗನಿಗೇ ಕೊಟ್ಟು ಮದುವೆ ಮಾಡಲು ಸಿದ್ಧಳಾಗಿರುವುದಾಗಿ ಹೇಳಿದಳು. ಏಕೇಂದರೇ ದೊಡ್ಡ ಮಗನೇ ರಾಜ್ಯಕೇ್ಕ ರಾಜನಾಗುವುದು ಸಂಪ್ರದಾಯವಾಗಿ ರುವು ದರಿಂದಲೂ, ಅವನನ್ನು ಮದುವೆಯಾಗುವ ತನ್ನ ಮಗಳು ರಾಣಿಯಾಗು ತಾ್ತಳೆಂಬುದೂ ಅವಳ ಆಸೆಯಾಗಿತ್ತು. ಇತ್ತ ರಾಜನ ಎರಡನೇ ಮಗನಿಗೇ ಸಂಗೀತ ನಾಟ್ಯ ಸಾಹಿತ್ಯಗಳಂತಹ ಲಲಿತ ಕಲೆಗಳ ಮೇಲೆ ಅತ್ಯಂತ ಆಸಕ್ತಿ. ಆದ್ದರಿಂದ ಅವನಿಗೇೀ ಆ ನರ್ತಕಿಯ ಮಗಳು ಸರಿಯಾದ ವಧುವಾಗು ತಾ್ತಳೆಂದು ರಾಜನು ಯೋಚಿಸಿದನು.
                             ಆದರೆ, ತನ್ನ ಆಯ್ಕೆಯನ್ನು ಅವರ ಮೇಲೆ ಬಲವಂತವಾಗಿ ತುರುಕಲು ಬಯಸಲಿಲ್ಲ. ಒಂದು ಪರೀಕೇ್ಷಯ ಮೂಲಕ ಯೋಗ್ಯ ವರನನ್ನು ನಿರ್ಣಯಿಸ ಬೇಕೇಂದುಕೊಂಡನು. ಮೂವರು ಕುಮಾರರನ್ನೂ ಕರೆಸಿದನು. ನರ್ತಕಿಯ ಮಗಳ ವಿಷಯವನ್ನು ತಿಳಿಸಿದನು. ಮೂವರನ್ನೂ ಮೂರು ದಿಕ್ಕುಗಳಲ್ಲಿ ತಮಗೇ ತಿಳಿಯದ ಹೊರ ರಾಜ್ಯಗಳಿಗೇ ಹೋಗಿ ಆರು ತಿಂಗಳುಗಳೊಳಗೇ ಆ ಕನಾ್ಯಮಣಿಗೇ ಯೋಗ್ಯ ವಾದ ಹಾಗೂ ಆಕೇಯು ಮೆಚ್ಚುವಂತಹ ಒಂದು ಅದ್ಭುತವಾದ ಬಹುಮಾನದೊಡನೆ ಹಿಂದಿರುಗ ಬೇಕೇಂದೂ, ಅತಂಹ ಬಹುಮಾನವನ್ನು ಈ ರಾಜ್ಯದಲ್ಲಿ ಇದುವರೆಗೂ ಬೇರೆಯಾರೂ ನೋಡಿರಕೂಡ ದೆಂದೂ ಹೇಳಿದನು. ಅತ್ಯಂತ ಅದ್ಭುತವಾದ, ಅಪೂರ್ವವಾದ ಬಹುಮಾನವನ್ನು ತಂದವರೇ ಆ ನರ್ತಕಿಯ ಮಗಳನ್ನು ಮದುವೆ ಯಾಗಲು ಅರ್ಹನೆಂದೂ ಹೇಳಿದನು.
                      ಆ ಮಾತನ್ನು ಕೇೀಳಿ ರಾಜಕುಮಾರರುಗಳು ಅತಾ್ಯನಂದ ಹೊಂದಿದರು. ಮಾರನೆಯ ದಿನ ಬೆಳಗಿನ ಜಾವದಲ್ಲೇ ಹುಮ್ಮಸ್ಸಿನಿಂದ ಮೂವರೂ ಕುದುರೆಗಳನ್ನು ಹತ್ತಿ ಹೊರಟರು. ರಾಜಧಾನಿಯ ಗಡಿಯಲ್ಲಿದ್ದ ವಟವೃಕ್ಷದ ಬಳಿಬಂದಾಗ, ತಂದೆಯು ಕೊಟ್ಟಗಡುವಿನ ಪ್ರಕಾರ ಆರು ತಿಂಗಳ ನಂತರ ರಾಜಧಾನಿಗೇ ಸೇರುವ ಮೊದಲು, ಆಗ ಬರುವ ಚೈತ್ರಪೌರ್ಣಮಿಯ ದಿನ ಮತ್ತೆ ಇಲ್ಲಿ ಅವರು ಒಂದಾಗಿ ಸೇರ ಬೇಕೇಂದು ಮಾತಾಡಿಕೊಂಡು, ಮೂವರೂ ಮೂರು ದಿಕ್ಕುಗಳಿಗೇ ಹೊರಟರು.
                   ದೊಡ್ಡ ಮಗನು ಪೂರ್ವ ದಿಕ್ಕಿಗೂ, ಎರಡ ನೆಯವನು ಪಶ್ಚಿಮಕ್ಕೂ, ಮೂರನೆಯವನು ದಕ್ಷಿಣ ದಿಕ್ಕಿಗೂ ಹೋದರು. ದೊಡ್ಡಮಗನು ಅಲ್ಲಲ್ಲೇ ತಂಗುತಾ್ತ, ಅಲ್ಲಿನ ವಿಶೇಷಗಳನ್ನು ಕೇೀಳಿ ತಿಳಿದುಕೊಳ್ಳುತಾ್ತ ಬಹಳ ದಿನಗಳ ಪ್ರಯಾಣ ಮಾಡಿದನು. ಆದರೆ ಆಸಕ್ತಿ ಕರವಾದ ವಸ್ತುವಾಗಲೀ, ವಿಷಯಗಳಾಗಲೀ ಒಂದೂ ಅವನ ದೃಷ್ಟಿಗೇ ಸಿಗಲಿಲ್ಲ. ಬರಿಕೈಯಲ್ಲಿ ಹಿಂದಿರುಗಲು ಇಷ್ಟವಿಲ್ಲದೆ ಒಂದು ಮರದ ಕೇಳಗೇ ಕುಳಿತುಕೊಂಡು ಗಾಢವಾಗಿ ಯೋಚಿ ಸುತ್ತಿದಾ್ದಗ ಅವನಿಗೊಂದು ವಿಚಿತ್ರ ದೃಶ್ಯವು ಕಂಡುಬಂದಿತು. ಆ ಮರದ ಮೇಲೆ ಕುಳಿತಿದ್ದ  ಪಕ್ಷಿಗಳು ಮಾನವ ಭಾಷೆಯಲ್ಲಿ ಮಾತಾಡುತ್ತಿದ್ದುವು. ಅಲ್ಲದೆ ಆ ಒಂದೇ ಮರದಲ್ಲಿ ಬಗೇಬಗೇಯ ಹಣ್ಣುಗಳಿದ್ದುವು.

                        ಆಶ್ಚರ್ಯದಿಂದ ಅವನು ಎದ್ದು ಪಕ್ಷಿಗಳನ್ನು ಹಿಡಿಯಲು ಯತ್ನಿಸಿದನು. ಆದರೆ ಸಾಧ್ಯ ವಾಗಲಿಲ್ಲ. ಆ ಮರದ ಹಣ್ಣುಗಳನ್ನು ಕಿತ್ತು ಕೊಂಡು ರಾಜಧಾನಿಗೇ ಹೋದ ಮಾತ್ರಕೇ್ಕ ದೊಡ್ಡದಾಗಿ ದೊರಕುವುದೇನೂ ಇರಲಿಲ್ಲ, ಆದ್ದರಿಂದ ಮತ್ತೇನಾದರೂ ವಿಚಿತ್ರ ವಸ್ತುಗಳು ಸಿಗುವುದೇನೋ ನೋಡೋಣವೆಂದು ಕೊಂಡು ಮತ್ತಷ್ಟು ಮುಂದೆ ಹೋದನು.
 ಅವನು ಮತ್ತೆ ಕೇಲವು ದಿನ ಪ್ರಯಾಣ ಮಾಡಿ, ಒಂದು ಪಟ್ಟಣವನ್ನು ತಲುಪಿದನು. ಅಲೊ್ಲಬ್ಬ ವಾ್ಯಪಾರಿಯು ಸುಂದರವಾದ ರತ್ನಗಂಬಳಿಗಳನ್ನು ಮಾರುತ್ತಿದ್ದನು. ಅವು ತುಂಬಾ ಆಕರ್ಷಕ ವಾಗಿದ್ದವು. ರಾಜಕುಮಾರನು ಕುದುರೆಯಿಂದಿಳಿದು ಅವನ ಬಳಿ ಹೋದನು. ಆ ವಾ್ಯಪಾರಿಯು ಕೇಲವು ರತ್ನಗಂಬಳಿಗಳನ್ನು ಅವನಿಗೇ ತೋರಿಸಿದನು. ಅವುಗಳಲ್ಲಿ ಒಂದು ಅತ್ಯಂತ ಆಕರ್ಷಣೀಯವಾಗಿ ಕಂಡುಬಂದಿತು. ಬೆಲೆಯನ್ನು ಕೇೀಳಿದಾಗ, ‘‘ಐದು ಸಹಸ್ರ ರೂಪಾಯಿಗಳು’’ ಎಂದನು ವಾ್ಯಪಾರಿಯು. ‘‘ಏನು! ಒಂದು ಕಂಬಳಿಗೇ ಐದು ಸಹಸ್ರ ರೂಪಾಯಿಗಳೇ? ಅಷ್ಟು ಹೆಚ್ಚು ಬೆಲೆ ಬಾಳಲು ಏನಿದೆ ಅದರಲ್ಲಿ?’’ ಎಂದು ಕೇೀಳಿದನು ರಾಜಕುಮಾರನು.
‘‘ಇದು ಸಾಧಾರಣ ರತ್ನಗಂಬಳಿಯಲ್ಲ. ಇದನ್ನು ಹಾಸಿ ಇದರ ಮೇಲೆ ಕುಳಿತು, ಎಲ್ಲಿಗೇ ಹೋಗಬೇಕೇಂದರೆ ಅಲ್ಲಿಗೇ ಹೋಗಿ ಸೇರಿಸುತ್ತದೆ. ಆದ್ದರಿಂದಲೇ ಅಷ್ಟು ಬೆಲೆ’’ ಎಂದು ವಿವರಿಸಿದನು ವಾ್ಯಪಾರಿಯು. ರಾಜಕುಮಾರನು ಕಿಂಚಿತ್ತೂ ಯೋಚಿಸದೆ ಅದನ್ನು ಕೊಂಡು ಎಚ್ಚರಿಕೇಯಾಗಿ ಮಡಚಿಟ್ಟುಕೊಂಡು ಊರಿಗೇ ಹಿಂದಿರುಗಿ ಹೊರಟನು. ಪಶ್ಚಿಮ ದಿಕ್ಕಿಗೇ ಹೋದ ಎರಡನೆಯ ರಾಜಕುಮಾರನು ಸಹಾ ಅನೇಕ ಸ್ಥಳಗಳನ್ನು ತಿರುಗಿ ನೋಡಿದನು. ನರ್ತಕಿಯ ಮಗಳಿಗೇ ಬಹುಮಾನವಾಗಿ ಕೊಡಲು ಸೂಕ್ತವಾದ ಅಪೂರ್ವವಸ್ತುವು ಏನೂ ಕಂಡು ಬರಲಿಲ್ಲ. ಒಂದು ಕಡೆ ಅವನಿಗೇ ಬಾಗಿಲು ಕಿಟಕಿಗಳನ್ನು ತೆಗೇದಿಟ್ಟಿದ್ದ ಮನೆಯೊಂದು ಕಂಡು ಬಂದಿತು. ಮನೆಯೊಳಗೇ ಯಾರೂ ಕಂಡುಬರಲಿಲ್ಲ. ಸಾಮಾನುಗಳಿದ್ದ ಕೇಲವು ಅಂಗಡಿಗಳೂ ಕಂಡುಬಂದುವು.

ಆದರೆ ಒಬ್ಬ ವಾ್ಯಪಾರಿಯೂ ಕಂಡು ಬರಲಿಲ್ಲ. ಅದು ಅವನಿಗೇ ತುಂಬಾ ವಿಚಿತ್ರವಾಗಿ ತೋಚಿತು. ಪಕ್ಕದಲ್ಲೇ ಒಂದು ದಾಳಿಂಬೆಯ ಮರದ ತುಂಬಾ ಹಣ್ಣುಗಳಿದ್ದುದು ಕಂಡು ಬಂದಿತು. ಒಂದು ಹಣ್ಣನ್ನು ಕಿತ್ತುಕೊಳ್ಳಲು ಹೋದನು. ಆ ಕ್ಷಣವೇ ‘‘ಹಣ್ಣನ್ನು ಕೀಳಬೇಡ’’ ಎನ್ನುತಾ್ತ ತೋಟದ ಮಾಲಿಯು ಪ್ರತ್ಯಕ್ಷನಾದನು. ‘‘ಏಕೇ ಕೀಳ ಬಾರದು?’’ ಎಂದು ಕೇೀಳಿದನು ರಾಜಕುಮಾರನು. ‘‘ಈ ಮರದಲ್ಲಿರುವ ಹಣ್ಣುಗಳು ತುಂಬಾ ಅಮೂಲ್ಯವಾದುವು’’ ಎಂದನು ಮಾಲಿಯು. ‘‘ಸರಿಯೇ ಎಷ್ಟು ದುಡ್ಡು ಹೇಳು ಕೊಡುತ್ತೇನೆ’’ ಎಂದನು ರಾಜಕುಮಾರನು.

ತೋಟದ ಮಾಲಿಯು ‘‘ಐದು ಸಹಸ್ರ ರೂಪಾಯಿಗಳು’’ ಎಂದನು. ರಾಜಕುಮಾರನು ನಗುತಾ್ತ ‘‘ಐದು ಸಹಸ್ರ ಕೊಟ್ಟರೆ ಇಂತಹ ಹತ್ತು ಮರಗಳನ್ನೇ ಕೊಳ್ಳ ಬಹುದು.ನೀನು ಕೇೀವಲ ಒಂದು ಹಣ್ಣಿಗೇೀ ಅಷ್ಟು ಬೆಲೆ ಹೇಳಲು, ಆ ಹಣ್ಣಿನ ಮಹತ್ವ ವೇನು?’’ ಎಂದು ಕೇೀಳಿದನು ರಾಜಕುಮಾರನು. ಆ ಮರದ ದಾಳಿಂಬೆಗೇ ಎಂತಹ ವಾ್ಯಧಿಯನ್ನೇ ಆದರೂ ಒಂದು ಕ್ಷಣದಲ್ಲಿ ಗುಣಪಡಿಸುವ ಶಕ್ತಿ ಇದೆ. ಹಣ್ಣನ್ನು ಕಿತ್ತು ಬೀಜಗಳನ್ನು ಹೊರ ತೆಗೇದರೂ, ಹಣ್ಣಿನ ಮೇಲಿನ ಸಿಪ್ಪೆಯು ತಾನಾಗೇೀ ಮುಚ್ಚಿಕೊಂಡು ಅದರೊಳಗೇ ಮತ್ತೆ ಬೀಜಗಳು ಬರುತ್ತವೆ. ಹಣ್ಣನ್ನು ಬಿಡಿಸಿದಂತೆಯೇ ತಿಳಿಯದು’’ ಎಂದು ಹೇಳಿದನು ಮಾಲಿಯು.

ಇದು ನಿಜವಾಗಿಯೂ ನರ್ತಕಿಯ ಮಗಳಿಗೇ ಕೊಡಲು ತಕ್ಕ ಅಮೂಲ್ಯ ಕಾಣಿಕೇಯೇ ಎಂದು ಭಾವಿಸಿದ ರಾಜಕುಮಾರನು, ಹಣ್ಣನ್ನು ಕೊಂಡು ಕೊಂಡು ಕುದುರೆಯನ್ನು ಹತ್ತಿ ತನ್ನ ರಾಜ್ಯಕೇ್ಕ ಹಿಂದಿರುಗಿ ಹೊರಟನು. ದಕ್ಷಿಣ ದಿಕ್ಕಿಗೇ ಹೋದ ಮೂರನೆಯ ರಾಜಕುಮಾರನು ಒಂದು ದಿನ ದರ್ಪಣಮಂದಿರಗಳು ತುಂಬಿದ ಒಂದು ವಿಚಿತ್ರ ನಗರವನ್ನು ತಲುಪಿದನು. ಅಲ್ಲಿನ ಪ್ರಜೆಗಳೂ ಸಹಾ ಗಾಜಿನಿಂದ ತಯಾರಾದ ವಸ್ತ್ರಗಳನ್ನೇ ಧರಿಸಿರುವುದನ್ನು ರಾಜಕುಮಾರನು ಗಮನಿಸಿದನು. ಆದರೆ ಆ ಉಡುಪುಗಳು ಮಡಚಲೂ, ಧರಿಸಲೂ ಅನುಕೂಲವಾಗಿದ್ದುವು. ಆದರೆ ಕನ್ನಡಿಯಂತೆ ಪ್ರಕಾಶಿಸುತ್ತಲೂ ಇದ್ದವು.

ಒಂದು ಕುಸುರಿ ಕೇಲಸ ಮಾಡಿದ್ದ ಒಂದು ಕೈಗನ್ನಡಿಯನ್ನು ನೋಡಿದ ರಾಜಕುಮಾರನು ಅದನ್ನು ಕೊಳ್ಳಲು ಬೆಲೆ ವಿಚಾರಿಸಿದನು. ಐದು ಸಹಸ್ರವೆಂದು ಹೇಳಿ ಆ ಕನ್ನಡಿಯ ಮಹಿಮೆಯನ್ನು ಕೂಡಾ ವಿವರಿಸಿದನು, ವಾ್ಯಪಾರಿಯು. ಆ ಕನ್ನಡಿಯನ್ನು ಮುಂದಿಟ್ಟುಕೊಂಡು ಯಾವ ವ್ಯಕ್ತಿಯನ್ನು ನೆನೆಸಿಕೊಂಡರೂ, ಆ ವ್ಯಕ್ತಿಯು ಎಲ್ಲಿ ಹೇಗಿದಾ್ದನೆ ಎಂಬುದು ಆ ಕನ್ನಡಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆಯೆಂದು.

ಕೂಡಲೇ ಐದು ಸಹಸ್ರವನ್ನು ಕೊಟ್ಟು ಕನ್ನಡಿಯನ್ನು ಕೊಂಡುಕೊಂಡು, ಕುದುರೆಯನ್ನು ಹತ್ತಿ ಅಣ್ಣಂದಿರನ್ನು ಸಂಧಿಸಲು ಶರವೇಗದಿಂದ ಹೊರಟನು. ಮೂವರು ಅಣ್ಣತಮ್ಮಂದಿರೂ, ಮೊದಲು ಮಾತಾಡಿಕೊಂಡ ಪ್ರಕಾರ ರಾಜಧಾನಿಯ ಎಲ್ಲೆಯಲ್ಲಿದ್ದ ಆಲದ ಮರದ ಬಳಿ ನಿಷ್ಕರ್ಷಿಸಿ ಕೊಂಡಿದ್ದ ಸಮಯಕೇ್ಕ ಸಂಧಿಸಿದರು. ತಮ್ಮ ಅನುಭವಗಳನ್ನೂ ನೋಡಿದ ವಿಚಿತ್ರಗಳನ್ನೂ ಒಬ್ಬರೊಡನೊಬ್ಬರು ಉತಾ್ಸಹದಿಂದ ಹೇಳಿಕೊಂಡರು. ತಾವು ಯಾರಿಗಾಗಿ ಬಹುಮಾನ ತರಲು ಇಷ್ಟು ದೂರ ಹೋಗಿ ಬರಬೇಕಾಯಿತೋ ಆ ಯುವತಿಯ ಜ್ಞಾಪಕವು ಬಂದುದರಿಂದ ಅವಳನ್ನು ನೋಡಬೇಕೇಂದು ಕೊಂಡರು. ಮೂರನೆಯ ರಾಜಕುಮಾರನು ಉತಾ್ಸಹದಿಂದ ಚೀಲದಲ್ಲಿದ್ದ ಮಾಯಾದರ್ಪಣವನ್ನು ತೆಗೇದು ನೋಡಿದನು. ಕೂಡಲೇ ‘‘ಆಹಾ!’’ ಎಂದು ದಿಗಾ್ಭ್ರಂತಿ ಹೊಂದಿದನು.
ಉಳಿದಿಬ್ಬರಣ್ಣ ತಮ್ಮಂದಿರು ಆ ಕನ್ನಡಿಯಲ್ಲಿ ನೋಡಿ ಖಿನ್ನರಾದರು. ಆ ಯುವತಿಯು ಭಯಂಕರವಾದ ವಾ್ಯಧಿಯಿಂದ ಹಾಸಿಗೇ ಹಿಡಿದಿದ್ದಳು.

ಹಾಸಿಗೇಯ ಪಕ್ಕದಲ್ಲಿ ಅವಳ ತಾಯಿಯು ಮ್ಲಾನವದನಳಾಗಿ ಕುಳಿತು ಅವಳಿಗೇ ಯಾವುದೋ ಔಷಧಿಯನ್ನು ಕುಡಿಸಲು ಯತ್ನಿಸುತ್ತಿದ್ದಳು. ಮಹಾತ್ಮೆಯುಳ್ಳ ದಾಳಿಂಬೆ ಹಣ್ಣನ್ನು ತಂದಿದ್ದ ಎರಡನೇ ರಾಜಕುಮಾರನು ‘‘ನಾನು ಅವಳ ಬಳಿಗೇ ಹೋಗಿ, ಈ ದಾಳಿಂಬೆ ಬೀಜಗಳನ್ನು ಕೊಟ್ಟೆನಾದರೆ, ಅವಳ ವಾ್ಯಧಿಯು ಗುಣವಾಗುತ್ತದೆ. ಆದರೆ ಅಲ್ಲಿಗೇ ಹೋಗುವುದು ಹೇಗೇ ಎಂಬುದೇ ಸಮಸ್ಯೆ’’ ಎಂದನು ಚಿಂತಾಕಾ್ರಂತನಾಗಿ.
ಅವಳಿಗಾಗಿ ರತ್ನಗಂಬಳಿಯನ್ನು ಬಹುಮಾನವಾಗಿ ತಂದಿದ್ದ ದೊಡ್ಡ ರಾಜಕುಮಾರನು ಅದರ ಮಹಿಮೆಯನ್ನು ತಮ್ಮಂದಿರಿಗೇ ಹೇಳಿ, ಅದನ್ನು ನೆಲದ ಮೇಲೆ ಹಾಸಿ ತಾನೂ ಕುಳಿತುಕೊಳ್ಳುತಾ್ತ, ತಮ್ಮಂದಿರನ್ನೂ ಕುಳಿತು ಕೊಳ್ಳಲು ಹೇಳಿದನು. ಮೂವರನ್ನೂ ಎತ್ತಿಕೊಂಡು ಆಕಾಶದಲ್ಲಿ ಹಾರುತಾ್ತ ಹೋದ  ರತ್ನಗಂಬಳಿಯು ಅವರನ್ನು ನರ್ತಕಿಯ ಮನೆಯ ಮುಂದೆ ಇಳಿಸಿತು. ಆ ಯುವತಿಯ ವಾ್ಯಧಿಯನ್ನು ಗುಣಪಡಿಸುತ್ತೇವೆಂದು ಹೇಳಿದುದರಿಂದ, ಅವಳ ತಾಯಿಯು ಮೂವರು ಯುವಕರನ್ನೂ ಪ್ರೀತಿಯಿಂದ ಒಳಕೇ್ಕ ಬರಮಾಡಿಕೊಂಡಳು. ಎರಡನೆಯ ರಾಜಕುಮಾರನು ದಾಳಿಂಬೆಯ ಹಣ್ಣನ್ನು ಬಿಡಿಸಿ, ಅದರಲ್ಲಿದ್ದ ಕೇಲವು ಬೀಜಗಳನ್ನು ತೆಗೇದು ಆ ಯುವತಿಗೇ ಕೊಟ್ಟನು.

ಹಣ್ಣನ್ನು ತಿಂದ ಯುವತಿಯು ಒಂದು ಕ್ಷಣ ಕಣ್ಣುಮುಚ್ಚಿಕೊಂಡಿದ್ದು ಕೂಡಲೇ ಎದ್ದು ಕುಳಿತುಕೊಳ್ಳುತಾ್ತ ‘‘ಅಮ್ಮಾ ನನಗೇ ಗುಣವಾಯಿತು ಯಾವ ತೊಂದರೆಯೂ ಇಲ್ಲ’’ ಎಂದಳು ಸಂತೋಷದಿಂದ ನಗುತಾ್ತ. ಅವಳ ತಾಯಿಯು ತಡೆಯಲಾರದ ಆನಂದದಿಂದ ಆ ಯುವಕರಿಗೇ ಕೃತಜ್ಞತೆಯನ್ನು ಹೇಳಿಕೊಂಡಳು. ತಾವು ಯಾರೆಂಬುದನ್ನು ಹೇಳಿಕೊಳ್ಳದೇ ರಾಜಕುಮಾರರು ಅಲ್ಲಿಂದ ರತ್ನಗಂಬಳಿಯ ಮೇಲೇ ಹೊರಟು ರಾಜಧಾನಿಯ ಎಲ್ಲೆಯಲ್ಲಿದ್ದ ಕುದುರೆಗಳ ಬಳಿಗೇ ಬಂದು, ಅಲ್ಲಿಂದ ಕುದುರೆಗಳ ಮೇಲೆ ಅರಮನೆಯನ್ನು ಸೇರಿಕೊಂಡರು.

ಅವರನ್ನು ನೋಡಿದ ರಾಜನು ತುಂಬಾ ಸಂತೋಷಿಸಿದನು. ಕುಮಾರರು ಭಾವೀವಧುವನ್ನು ನೋಡಿ, ಅವಳ ವಾ್ಯಧಿಯನ್ನು ಗುಣಪಡಿಸಿದುದನ್ನು ವಿವರಿಸಿದರು. ಈಗ ಆ ಯುವತಿಯನ್ನು ತನ್ನ ಮೂವರು ಕುಮಾರರುಗಳಲ್ಲಿ ಯಾರಿಗೇ ವಿವಾಹ ಮಾಡುವುದು ಎಂದು ರಾಜನು ಒಂದು ತೀರ್ಮಾನಕೇ್ಕ ಬರಲಾರದಾದನು. ತಾಯಿ ಮಗಳನ್ನು ಕರೆಸಿಕೊಂಡು, ಅವರಿಗೇ ತಕ್ಕ ವರನನ್ನು ಅವರೇ ಆರಿಸಿಕೊಳ್ಳುವ ಜವಾಬಾ್ದರಿಯನ್ನು ಅವರಿಗೇೀ ಒಪ್ಪಿಸಿಬಿಡುವುದೆಂದು ಕೊಂಡನು. ತಾಯಿ, ಮಗಳು ಬಂದೊಡನೆಯೇ ಅವರನ್ನು ಬರಮಾಡಿಕೊಂಡು, ತನ್ನ ಕುಮಾರರುಗಳು ತೆಗೇದುಕೊಂಡು ಬಂದಿರುವ ಬಹುಮಾನ ಗಳನ್ನೂ, ತನ್ನ ಸಮಸ್ಯೆಗಳನ್ನೂ ತಿಳಿಯ ಪಡಿಸಿ, ‘‘ನನ್ನ ಮಕ್ಕಳುಗಳು ನಿಮ್ಮ ಮನೆಗೇ ಬಂದಾಗ ಅವರು ಯಾರೆಂಬುದನ್ನು ಬಹಿರಂಗ ಪಡಿಸಲಿಲ್ಲ.
ಅವರು ಮಾಡಿದ ಸಹಾಯಕೇ್ಕ ನೀವು ಕೃತಜ್ಞತೆಗಳನ್ನು ತಿಳಿಸಿರುವಿರಿ. ಅದಕೇ್ಕ ಮೊದಲು ನಡೆದ ಘಟನೆಗಳನ್ನು ಒಂದು ಸಲ ಅವಲೋಕಿಸೋಣ. ಮೊದಲನೆಯದಾಗಿ ನನ್ನ ಕನಿಷ್ಠ ಕುಮಾರನು ಮಾಯಾದರ್ಪಣದಲ್ಲಿ ನೋಡದೇ ಇದ್ದಲ್ಲಿ ನಿನ್ನ ಮಗಳ ಅನಾರೋಗ್ಯದ ಸಂಗತಿಯು ತಿಳಿಯುತ್ತಲೇ ಇರಲಿಲ್ಲ. ನನ್ನ ಎರಡನೆಯ ಮಗನ ಹತ್ತಿರ ಆ ಮಹತ್ವದ ದಾಳಿಂಬೆ ಹಣ್ಣಿದ್ದರೂ ಸಹಾ, ನನ್ನ ಜ್ಯೇಷ್ಠ ಕುಮಾರನ ಹತ್ತಿರ ಹಾರುವ ರತ್ನಗಂಬಳಿ ಇಲ್ಲದಿದ್ದಲ್ಲಿ ಅವರು ಸಮಯಕೇ್ಕ ಬಂದು ಸೇರಲಾಗುತ್ತಿರಲಿಲ್ಲ. ನಿನ್ನ ಮಗಳು ಗುಣಹೊಂದಲು ಅವರು ಮೂವರೂ ಸಮಾನವಾಗಿಯೇ ಸಹಾಯ ಮಾಡಿದಾ್ದರೆ. ಈಗ ನನ್ನ ಮೂವರು ಮಕ್ಕಳನ್ನೂ ಕರೆಸುತ್ತೇನೆ. ಅವರಲ್ಲಿ ಒಬ್ಬರನ್ನು ನಿನ್ನ ಅಳಿಯನನಾ್ನಗಿ ಆರಿಸಿಕೊಳ್ಳುವ ಜವಾಬಾ್ದರಿ ನಿನ್ನದು’’ ಎಂದನು ರಾಜನು. ರಾಜಕುಮಾರರು ಮೂವರೂ ಅಲ್ಲಿಗೇ ಬಂದರು.
ಅವರನ್ನು ನೋಡಿ ತಾಯಿ, ಮಗಳು ತುಂಬಾ ಸಂತೋಷಿಸಿದರು. ಸ್ವಲ್ಪ ಹೊತ್ತು ವೌನವಾಗಿ ಯೋಚಿಸಿದ ತಾಯಿಯು ರಾಜನ ಕಡೆಗೇ ತಿರುಗಿ, ‘‘ಮಹಾರಾಜಾ! ನನ್ನ ಮಗಳ ವಾ್ಯಧಿನೀಗಲು ಮುಖ್ಯಕಾರಣ ತಮ್ಮ ದ್ವಿತೀಯ ಪುತ್ರನೇ. ಅವನೇನಾದರೂ ಆ ಮಹಿಮಾನ್ವಿತ ದಾಳಿಂಬೆಯ ಹಣ್ಣನ್ನು ತರದಿದ್ದಲ್ಲಿ ನನ್ನ ಮಗಳು ಆ ವಾ್ಯಧಿಯಿಂದ ಗುಣಮುಖಳಾಗುತ್ತಿರಲಿಲ್ಲವೇನೋ! ಆದ್ದರಿಂದ ಅವನನ್ನು ಮದುವೆಯಾಗಲು ನನ್ನ ಮಗಳು ಸಂತೋಷದಿಂದ ಒಪ್ಪಿಕೊಳ್ಳುತಾ್ತಳೆ ಎಂದು ಭಾವಿಸುತ್ತೇನೆ’’ ಎಂದು ಮಗಳ ಕಡೆಗೇ ನೋಡಿದಳು.
ಅದುವರೆಗೂ ವೌನವಾಗಿ ತಲೆತಗ್ಗಿಸಿಕೊಂಡಿದ್ದ ಅವಳ ಮಗಳು ಒಂದು ಸಲ ರಾಜರ ಎರಡನೆಯ ಮಗನ ಕಡೆಗೇ ನಾಚುತಾ್ತ ನೋಡಿ ತಾಯಿಯೊಡನೆ, ‘‘ನಿಮ್ಮ ಇಷ್ಟ ಪ್ರಕಾರವೇ ಮಾಡಿ’’ ಎಂದಳು ನಸುನಗುತಾ್ತ.

ತಾಯಿ, ಮಗಳ ತೀರ್ಮಾನವು ರಾಜನಿಗೇ ಆನಂದವನ್ನುಂಟು ಮಾಡಿತು. ಏಕೇಂದರೆ ಕನ್ಯೆಯನ್ನು ನೋಡುವ ಮೊದಲೇ, ಸಂಗೀತ, ನಾಟ್ಯ ಕಲಾಪ್ರಿಯನಾದ ತನ್ನ ಎರಡನೆಯ ಕುಮಾರನೇ ಅವಳಿಗೇ ತಕ್ಕ ವರನೆಂದು ಭಾವಿಸಿದ್ದನು, ‘‘ನನ್ನ ದ್ವಿತೀಯ ಕುಮಾರನಿಗೇ ಮೊದಲು ವಿವಾಹವಾಗುತ್ತಿದೆ. ಆದ್ದರಿಂದ, ಅವನ ಪತ್ನಿಗೇ ರಾಣಿಯಾಗುವ ಅಂತಸ್ತು ದೊರಕುತ್ತದೆ’’ ಎಂದನು ರಾಜನು.
ನರ್ತಕಿಯ ಬಯಕೇಯೂ ಅದೇ ಆಗಿದ್ದಿತು. ರಾಜನ ದ್ವಿತೀಯ ಪುತ್ರನಿಗೂ ನರ್ತಕಿಯ ಮಗಳಿಗೂ ವಿಜೃಂಭಣೆಯಿಂದ ವಿವಾಹವು ನಡೆಯಿತು. ವಿವಾಹಾನಂತರ ಮಗಳ ಜೊತೆಗೇ ನರ್ತಕಿಯೂ ಅರಮನೆಯನ್ನು ಸೇರಿದಳು. ಅವಳನ್ನು ಎಲ್ಲರೂ ತುಂಬಾ ಗೌರವದಿಂದ ನೋಡಿ ಕೊಳ್ಳತೊಡಗಿದರು.

No comments:

Post a Comment